ಸತ್ಯ
ಮೇವ
ಜಯತೇ
ಕನ್ನಡದಲ್ಲೂ
ಡಬ್
ಆಗಲಿದೆ
ಎಂಬ
ಸುದ್ದಿ
ಡಬ್ಬಿಂಗ್
ಕುರಿತಾದ
ಪರ
ವಿರೋದದ
ಚರ್ಚೆಗೆ
ಮತ್ತೊಮ್ಮೆ
ನಾಂದಿ
ಹಾಡಿದೆ.
ಇಷ್ಟು
ದಿನ
ಅಂತರ್ಜಾಲದಲ್ಲಿ
ಮಾತ್ರ
ಸೀಮಿತವಾಗಿದ್ದ
ಈ
ಚರ್ಚೆ
ಸುದ್ದಿ
ವಾಹಿನಿಗಳ
ಮೂಲಕ
ಪರದೇ
ಮುಂದೆ
ಬಂದು
ನಿಂತಿದೆ.
ಇತ್ತೀಚಿಗೆ
ಸುವರ್ಣ
ಮತ್ತು
ಜನಶ್ರೀ
ವಾಹಿನಿಗಳಲ್ಲಿ
ಈ
ಕುರಿತು
ಚರ್ಚೆ
ಆಗಿದೆ.
ಎರಡೂ
ಚರ್ಚೆಗಳನ್ನು
ನೋಡಿದ
ಮೇಲೆ
ಅನ್ನಿಸಿದ್ದು
ಏನೆಂದರೆ,
ಚಿತ್ರರಂಗದ
೭೫
ವರ್ಷಗಳ
ಈ
ಪಯಣಕ್ಕೆ
ಮೂಲ
ಬೆನ್ನೆಲುಬಾಗಿ
ನಿಂತ
ಪ್ರೇಕ್ಷಕ
ಅಂದರೆ
ಗ್ರಾಹಕನ
ಬಗ್ಗೆ
ಚಿತ್ರರಂಗದ
ಕೆಲವರಿಗೆ
ಎಳ್ಳಷ್ಟು
ಗೌರವವಿಲ್ಲ.
ಚಿತ್ರರಂಗ
ಉದ್ಯಮವಲ್ಲದೇ
ಮತ್ತೇನು.?
ನಮ್ಮ
ಚಲನಚಿತ್ರಗಳು
ಬರೀ
ಕಲೆ,
ಸಂಸ್ಕ್ರುತಿ,
ಸೃಜನಶೀಲತೆಗಳನ್ನು
ಪಸರಿಸಲು
ಮಾತ್ರ
ಸೀಮಿತ
ಅಲ್ಲ.
ಅಲ್ಲಿ
ಕೊಡು
ಕೊಳ್ಳುವಿಕೆಯ
ವ್ಯವಹಾರ
ಇರುತ್ತೆ,
ಲಾಭ
ನಷ್ಟಗಳ
ಚಿಂತನೆ
ಇರುತ್ತೆ,
ಪ್ರೇಕ್ಷಕನ
ಎದುರು
ತಮ್ಮ
ಸರಕು
ಗೆಲ್ಲಬೇಕು
ಎಂಬ
ಹಂಬಲ
ಇರುತ್ತೆ,
ಸರಕನ್ನು
ತಯಾರು
ಮಾಡುವಾಗ
ಪ್ರೇಕ್ಷಕನ
ಅಭಿರುಚಿ
ಬಗ್ಗೆ
ವಿಶ್ಲೇಷಣೆಗಳು
ನಡೆಯುತ್ತೆ.
ತಮ್ಮ
ಸರಕನ್ನು
ತಯಾರು
ಮಾಡುವಾಗ
ಕಲೆ,
ಸಂಸ್ಕ್ರುತಿ,
ಸೃಜನಶೀಲತೆಗಳನ್ನು
ಕಚ್ಚಾ
ವಸ್ತುಗಳನ್ನಾಗಿ
ಬಳಸಿಕೊಳ್ಳಲಾಗುತ್ತೆ.
ಹೀಗೆ
ಒಂದು
ಉದ್ಯಮದಲ್ಲಿ
ನಡೆಯುವ
ಎಲ್ಲ
ಬಗೆಯ
ವಿಚಾರ
ವಿನಿಮಯಗಳು
ಇಲ್ಲಿ
ನಡೆಯುತ್ತವೆ.
ಆದ್ದರಿಂದ
ಯಾವ
ಅರ್ಥದಲ್ಲೂ
ಚಿತ್ರರಂಗವನ್ನು
ಒಂದು
ಉದ್ಯಮದ
ಹೊರತಾಗಿ
ನೋಡಲು
ಸಾದ್ಯವಿಲ್ಲ.
ಚಿತ್ರರಂಗ
ಕೂಡ
ಒಂದು
ಉದ್ಯಮವೆಂದಾದರೆ,
ಇತರ
ಉದ್ಯಮಗಳಿಗೆ
ಇರುವ
ಹಾಗೆ
ಅದಕ್ಕೂ
ಗ್ರಾಹಕರು
ಇರಲೇಬೇಕಲ್ಲವೇ.?
ಹಾಗಾದರೆ
ಆ
ಗ್ರಾಹಕ
ಯಾರು
ಎಂಬ
ಪ್ರಶ್ನೆಗೆ
ಚಿತ್ರರಂಗ
ಎಂಬ
ಉದ್ಯಮದಲ್ಲಿ
ತಯಾರಾಗುವ
ಚಲನಚಿತ್ರ
ಎಂಬ
ಸರಕುಗಳನ್ನು
ಒಪ್ಪಿಕೊಳ್ಳುವ
ಒಪ್ಪಿಕೊಳ್ಳದಿರುವ
ಸಾಮರ್ಥ್ಯ
ಇರುವ
ಪ್ರೇಕ್ಷಕನೇ
ಇದರ
ಗ್ರಾಹಕ
ಎಂಬುದೇ
ಇದಕ್ಕೆ
ಉತ್ತರವಾಗಿದೆ.
ಗ್ರಾಹಕನಿಗೆ
ಕ್ಯಾರೇ
ಎನ್ನದ
ಮಂದಿ.!
ಎರಡು
ದಿನಗಳಿಂದ
ಸುದ್ದಿ
ವಾಹಿನಿಗಳಲ್ಲಿ
ನಡೆದ
ಚರ್ಚೆಯಲ್ಲಿ ಚಿತ್ರರಂಗದ
ಸಾ.ರಾ.ಗೋವಿಂದು
ಅವರು
ಪ್ರೇಕ್ಷಕನನ್ನೇ
ಬೈದು
ಬಿಡುವುದೇ.!
"ವರ್ಷದಲ್ಲಿ
ಸುಮಾರು
೧೨೦
ಚಿತ್ರಗಳು
ಬಿಡುಗಡೆ
ಆಗ್ತಾವೆ.
ಆ
ನೂರಿಪ್ಪತ್ತು
ಚಿತ್ರಗಳನ್ನೇ
ನೀವು
ನೋಡ್ತಿಲ್ಲ,
ಇನ್ನು
ನೀವು
ಡಬ್
ಚಿತ್ರಗಳನ್ನು
ಏನ್
ನೋಡ್ತಿರಾ.?"
ಕೇಳಿದ್ರಾ
ಇವರ
ಮಾತು.
ಇವರು
ಗ್ರಾಹಕನನ್ನು
ಗುತ್ತಿಗೆ
ತೆಗೆದುಕೊಂಡಿದ್ದಾರೆ.
ಇವರು
ವರ್ಶಕ್ಕೆ
ನೂರಿಪ್ಪತ್ತು
ಚಿತ್ರ
ತೆಗೀತಾರೆ.
ನಾವು
ಅವು
ಹೆಂಗೇ
ಇರಲಿ,
ಅವುಗಳನ್ನೇ
ನೋಡಬೇಕಂತೆ.
ಈ
ಮಾತಿನಲ್ಲಿ
ನ್ಯಾಯ
ಅನ್ನೋದು
ಇದೆಯಾ.?
ಒಳ್ಳೆ
ಚಿತ್ರ
ಬಂದರೆ
ಗ್ರಾಹಕ
ಗೆಲ್ಲಿಸಿಯೇ
ಗೆಲ್ಲಸ್ತಾನೆ.
ಅದೇ
ಕಾರಣಕ್ಕೆ
ಅಲ್ಲವೇ
ದರ್ಶನ್
ಅಭಿನಯದ
ಸಾರಥಿ
ಚಿತ್ರಕ್ಕೆ
ಗ್ರಾಹಕ
ಬ್ಲಾಕ್
ಬಸ್ಟರ್
ಹಿಟ್
ಎಂಬ
ಪಟ್ಟ
ಕಟ್ಟಿದ್ದು.
ಅದು
ಬಿಟ್ಟು
ನೀವು
ಗೆಲ್ಲಿಸ್ತಿರಾ,
ನಮ್
ಚಿತ್ರ
ನೋಡ್ತಿರಾ
ಅನ್ನೊದು
ಸರಿಯೇ.?
ಗ್ರಾಹಕನನ್ನೇ
ತಪ್ಪಿತಸ್ಥನನ್ನಾಗಿ
ಮಾಡುವ,
ಅವನಲ್ಲೇ
ಹುಳುಕನ್ನು
ಹುಡುಕುವ
ಯಾವುದೇ
ಉದ್ಯಮ
ಯಶಸ್ವಿಯಾಗಿಲ್ಲ.
ಗ್ರಾಹಕನಿಗೆ
ಆಯ್ಕೆ
ಸ್ವಾತಂತ್ರ್ಯವಿದೆ.
ಗ್ರಾಹಕನ
ಆಯ್ಕೆ
ನಮ್ಮ
ಸರಕೇ
ಆಗಬೇಕು
ಎಂಬ
ನಿರೀಕ್ಷೆಯೊಂದಿಗೆ
ಎಲ್ಲ
ಉದ್ಯಮಗಳು
ಕಾರ್ಯ
ನಿರ್ವಹಿಸುತ್ತವೆ. ಆದರೆ
ನಮ್ಮ
ಚಿತ್ರರಂಗ
ಮಾತ್ರ
ನಮ್ಮ
ಸರಕು
ಮಾತ್ರವೇ
ಗ್ರಾಹಕನ
ಆಯ್ಕೆಯಾಗಬೇಕು
ಎಂಬ
ಪಾಳೆಗಾರಿಕೆ
ಮನಸ್ಥಿತಿಯನ್ನು
ಹೊಂದಿರುವುದು
ದುರಾದೃಷ್ಟ.
ಇನ್ನೊಂದು
ವಾಹಿನಿಯ
ಚರ್ಚೆಯಲ್ಲಿ
ಇವರು
ಹೇಳ್ತಾರೆ
ಕನ್ನಡಿಗರು
ಸ್ವಾಭಿಮಾನಿಗಳಲ್ಲ ಎಂದು.
ಪರಭಾಷೆ
ಚಿತ್ರವನ್ನು
ಕನ್ನಡದಲ್ಲಿ
ನೋಡಲು
ಬಿಡಿ
ಎಂದವರು
ಸ್ವಾಭಿಮಾನಿಗಳಲ್ವಂತೆ.
ಕನ್ನಡ
ವಿರೋದಿ
ನಿಲುವನ್ನೇ
ಕನ್ನಡ
ಪರ
ಎಂದು
ಬೆಂಬಲಿಸುತ್ತಿರುವಾಗ
ಸ್ವಾಬಿಮಾನಿ
ಎಂಬುದಕ್ಕೆ
ಇವರಲ್ಲಿ
ಅರ್ಥ
ಹುಡುಕುವುದೇ
ತಪ್ಪು
ಅಲ್ಲವೇ.?
ಅರ್ಥವಾಗದ ಕನ್ನಡಪರತೆ.?
ಡಬ್ಬಿಂಗ್
ವಿರೋದಿಗಳು
ತಮ್ಮ
ಎಲ್ಲ
ವಾದಗಳ
ಜೊತೆಗೆ ಕನ್ನಡಪರತೆ ಮತ್ತು
ನೈತಿಕತೆಯನ್ನು
ಸೇರಿಸುತ್ತಾರೆ.
ಆದರೆ
ಅವರ
ಕನ್ನಡಪರತೆಯೇ
ಗೊಂದಲಮಯವಾಗಿದೆ.
ಒಬ್ಬರು
ತಮಿಳಿನ
ಸಿನಿಮಾವನ್ನು
ತಮಿಳಿನಲ್ಲೇ
ನೋಡಿ
ಅಂತಾರೆ,
ಮತ್ತೊಬ್ಬರು
ನೀವು
ನಮ್ಮ
ಸಿನಿಮಾನೇ
ನೋಡಲ್ಲ
ಇನ್ನು
ಡಬ್ಬಿಂಗ್
ಸಿನಿಮಾ
ಯಾಕ್ರಿ
ಬೇಕು
ಅಂತ
ಉದ್ದಟತನ
ಮಾತಾಡ್ತಾರೆ. ಇನ್ನೊಬ್ರು ಹೇಳ್ತಾರೆ,
ಡಬ್ಬಿಂಗ್
ಬೇಕು
ಎನ್ನುವ
ಮೂಲಕ
ಪರಬಾಶೆಯನ್ನು
ಬೆಳೆಸುತ್ತಿದ್ದಿವಿ
ಅಂತ.!
ಇನ್ನು,
ನಮ್ಮ ಶಿವಣ್ಣನವರು
ಏನು
ಹೇಳಿದ್ದಾರೆ
ಅನ್ನೋದು
ವಸಿ
ನೋಡಿ.
ಹಿಂದಿ
ರಾಷ್ಟ್ರ
ಭಾಷೆ
ಅದಕ್ಕೆ
ನನ್ನದೇನೂ
ತಕರಾರು
ಇಲ್ಲ,
ಬೇರೆ
ಭಾಷೆ
ಚಿತ್ರಗಳನ್ನು
ನೋಡಿ,
ಆದರೆ
ಕನ್ನಡ
ಪ್ರೀತಿಸಿ
ಬೆಳೆಸಿ.
ಈ
ಮಾತುಗಳಲ್ಲಿ
ಎಲ್ಲಿದೆ
ಕನ್ನಡತನ.?
ಎಲ್ಲಿದೆ
ನೈತಿಕತೆ.?
ಪರಭಾಷೆ
ಚಿತ್ರಗಳನ್ನು
ಆಯಾ
ಭಾಷೆಗಳಲ್ಲೇ
ನೋಡಬೇಕು
ಎನ್ನುವುದು,
ಕರ್ನಾಟಕದಲ್ಲಿರುವ ಕನ್ನಡೇತರರನ್ನು
ಕನ್ನಡದ
ಮುಖ್ಯವಾಹಿನಿಗೆ
ತರುವತ್ತ
ಸರಕಾರ
ಗಮನ
ಹರಿಸಿರಬೇಕಾದರೆ
ಬೇರೆ
ಭಾಷಿಕರಿಗೋಸ್ಕರ
ಬೇರೆ
ಭಾಷೆ
ಚಿತ್ರಗಳು
ಬರಬೇಕು
ಎಂದು
ಹೇಳುವುದು,
ಆ
ಮೂಲಕ
ಕನ್ನಡೇತರರು
ಕರ್ನಾಟಕದಲ್ಲಿದ್ದರೂ
ಅವರನ್ನು
ಕನ್ನಡಿಗರನ್ನಾಗಿ
ಮಾಡದ
ಹಾಗೆ
ದೂರ
ತಳ್ಳುವುದು
ಕನ್ನಡಪರತೆಯೇ.?
ತಮ್ಮ
ಇಡೀ
ಸಿನಿಮಾ
ಪಯಣದಲ್ಲಿ
ಪ್ರೇಕ್ಷಕರನ್ನು
ಎಂದಿಗೂ
ನಿಂದಿಸದೇ,
ಅವರನ್ನು
ಪ್ರತಿಕ್ಷಣ
ಗೌರವ
ಭಾವನೆಯಿಂದ
ಕಂಡ
ಅಣ್ಣಾವ್ರ
ಆದರ್ಶಗಳು
ಅಣ್ಣಾವ್ರ
ಹೆಸರು
ಹೇಳುವವರಿಗೆ
ತುಸುವಾದರೂ
ಅನ್ವಯವಾಗುವುದಿಲ್ಲವೇ.?(ಆಗಿನ
ಕಾಲದಲ್ಲಿ
ಡಬ್ಬಿಂಗ್
ನಿಶೇದವನ್ನು
ಬೆಂಬಲಿಸಿದ್ದ
ಡಾ:
ರಾಜಕುಮಾರ್
ಅವರ
ನಿಲುವು
ಆಗಿನ
ಪರಿಸ್ಥಿತಿಗೆ
ಪೂರಕವಾಗಿತ್ತು
ಮತ್ತು
ಕಾಲಕ್ಕೆ
ತಕ್ಕಂತೆ
ನಾವು
ಬದಲಾಗಬೇಕು
ಎಂಬುದು
ಕೂಡ
ಅವರ
ಅಬಿಪ್ರಾಯವಾಗಿತ್ತು
ಅಲ್ಲವೇ.!)