Thursday 28 June 2012

ಬೆಸ್ಕಾಮ್ ನಲ್ಲಿ ಕಂಡ ಕನ್ನಡದ ಆಶಾಕಿರಣ


ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಮ್) ನಗರದಲ್ಲೆಡೆ ವಿದ್ಯುತ್ ಉಳಿಸುವ ಕುರಿತು ಜಾಹೀರಾತು ಫಲಕಗಳನ್ನು ಹಾಕಿದೆ. ಆದರೆ ಹೆಚ್ಚಿನ ಕಡೆಗಳಲ್ಲಿ ಜಾಹೀರಾತು ಕೇವಲ ಇಂಗ್ಲೀಶಿನಲ್ಲಿದ್ದು, 'ಸೇವ್ ಪವರ್' ಎಂದು ತೋರಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಕನ್ನಡದಲ್ಲಿದ್ದರೂ ಮೂಲ ಸಂದೇಶವನ್ನು ಇಂಗ್ಲೀಶಿನಲ್ಲಿ ಮಾತ್ರ ಕೊಡಲಾಗಿದೆ. ಇನ್ನು, ಕಂಟೋನ್ಮೆಂಟ್, ಮಾರತ್ ಹಳ್ಳಿ ಮತ್ತು ಅಲಸೂರು ನಂತಹ ಪ್ರದೇಶಗಳಲ್ಲಿ ಜಾಹೀರಾತು ಕೇವಲ ಇಂಗ್ಲೀಶಿನಲ್ಲಿದೆ. ಕುರಿತು ಬೆಸ್ಕಾಮ್ ಅದಿಕಾರಿಗಳಿಗೆ ಮಿಂಚೆ ಬರೆದಿದ್ದೆ. ಬೆಂಗಳೂರಿನಲ್ಲಿ ಆಡಳಿತ ಬಾಶೆ, ಪ್ರಾದೇಶಿಕ ಬಾಶೆ, ಜನರ ಬಾಶೆ ಎಲ್ಲವೂ ಕನ್ನಡವೇ ಆಗಿರುವುದರಿಂದ ಬಹುಪಾಲು ಜಾಹೀರಾತುಗಳನ್ನು ಕನ್ನಡದಲ್ಲೇ ಕೊಡುವುದು ಸರಿಯಾದ ನಡೆಯಾಗಿದೆ. ಕನ್ನಡ ಬಾರದವರಿಗಾಗಿ ಕೆಲವು ಇಂಗ್ಲೀಶ್ ಜಾಹೀರಾತುಗಳನ್ನು ಹಾಕಬಹುದು. ಆದರೆ ಕನ್ನಡ ಬಾರದವರನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಕನ್ನಡವನ್ನೇ ನಿರ್ಲಕ್ಶಿಸುವಂಥ ಕೆಲಸ ಆಗದಿರಲಿ ಎಂದು ಕೇಳಿಕೊಂಡಿದ್ದೆ. ಇಲಾಖೆಯಲ್ಲಿನ ಸೇವೆಗಳಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಅನುಶ್ಟಾನ ಮಾಡಿದಾಗ ಮಾತ್ರ ಅದು ಬೆಂಗಳೂರಿನ ಹೆಚ್ಚು ಜನರನ್ನು ತಲುಪಲು ಸಾದ್ಯ ಎಂಬ ಅಂಶವನ್ನು ಅವರ ಗಮನಕ್ಕೆ ತರಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಉತ್ತರ ನೀಡಿದ ಬೆಸ್ಕಾಮ್ ವ್ಯವಸ್ಥಾಪಕ ನಿರ್ದೇಶಕರಾದ ಪಿ. ಮಣಿವಣ್ಣನ್ ಅವರು ಬೆಸ್ಕಾಮ್ ಕಾರ್ಯವ್ಯಾಪ್ತಿಯಲ್ಲಿ ಕನ್ನಡದ ಅನುಶ್ಟಾನವನ್ನು ಪರಿಣಾಮಕಾರಿಯಾಗಿ ಮಾಡಲು ಇಲಾಖೆಯಲ್ಲಿ ಒಂದು ಡಿ.ಜಿ.ಎಮ್ ಹುದ್ದೆಯನ್ನು ಸ್ರುಶ್ಟಿ ಮಾಡಲಾಗುವುದು ಎಂದು ಹೇಳಿದ್ದಾರೆ. ಮೂಲಕ ಇಲಾಖೆಯಲ್ಲಿ ಹೆಚ್ಚೆಚ್ಚು ಜನರು ತಮ್ಮ ಎಲ್ಲ ಕೆಲಸಗಳಲ್ಲಿ ಕನ್ನಡವನ್ನು ಬಳಸುವ ಹಾಗೆ ಮಾಡುವ ಹೊಣೆಗಾರಿಕೆಯನ್ನು ಅವರಿಗೆ ನೀಡಲಾಗುವುದು ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ : ಆದಾರದ ಮೇಲೆಯೇ ಎಲ್ಲ ಬೆಸ್ಕಾಮ್ ಸಾರ್ವಜನಿಕ ಸಂಪರ್ಕಗಳಲ್ಲಿ ಕನ್ನಡ-ಇಂಗ್ಲೀಶ್ ಜಾಹೀರಾತುಗಳನ್ನು ಕೊಡಲಾಗುವುದು ಎಂದು ತಿಳಿಸಿದರು.
ಅವರ ಉತ್ತರ ಹೀಗಿದೆ.
-------------------------------------------------------------------------------------------------------------------------

---------- Forwarded message ----------
From: P Manivannan
Date: 2012/6/19
Subject: Re:
ಕನ್ನಡದಲ್ಲಿ ಜಾಗ್ರುತಿ ಮೂಡಿಸಿ.
To: "Mahesh............."
Cc: GM Administration , general manager it and bescom , AE to MD BESCOM , gm ca


Dear All,

Please see the email below.

I would suggest that we create a post of DGM, who will be in-charge for ensuring that Kannada is used widely in all BESCOM activities. He can go thru the details given and send it to everybody else, so that more and more persons start using Kannada in all their activities (including me).

I have already issued a note that, the ratio of Kannada:English shall be maintained as 2:1 for every public communication of BESCOM. GM.Adm to issue a office order on that.

Thanks to M R Mahesh for his valuable suggestions, and for focusing the issue.

lets see if Google transliteration can help us.

best

Manivannan

Dhanyavadagalu

--
Managing Director
Bangalore Electricity Supply company.
www.bescom.org
--------------------------------------------------------------------------------------------------------------------------------------------------------------------------------------------

ಮಿಂಚೆಯಿಂದಲೂ ಬದಲಾವಣೆ ಸಾದ್ಯ.
ಹುದ್ದೆ ಸ್ರುಶ್ಟಿಸುವುದರಿಂದಾಗುವ ಲಾಬ ನಶ್ಟಗಳ ವಿಶಯ ಏನೇ ಇದ್ದರೂ ಕನ್ನಡದ ಅನುಶ್ಟಾನಕ್ಕಾಗಿ ಇಲಾಖೆ ವ್ಯಾಪ್ತಿಯಲ್ಲಿ ಒಂದು ಹುದ್ದೆ ಸ್ರುಶ್ಟಿಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ೧೯೬೩ ರಲ್ಲೇ ಕರ್ನಾಟಕ ಆಡಳಿತ ಬಾಶೆ ಕಾಯ್ದೆಯನ್ನು ಜಾರಿಗೆ ತಂದರೂ ಇನ್ನು ಅನೇಕ ಸರಕಾರಿ ಇಲಾಖೆಗಳಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಅನುಶ್ಟಾನ ಮಾಡದಿರುವುದನ್ನು ನೋಡಬಹುದಾಗಿದೆ. ಹಿನ್ನೆಲೆಯಲ್ಲಿ ಮಣಿವಣ್ಣನ್ ಅವರ ನಿರ್ದಾರ ಅಬಿನಂದನಾರ್ಹ ಮತ್ತು ಇತರ ಇಲಾಖೆಗಳಿಗೂ ಮಾದರಿಯಾಗಿದೆ. ಬೆಸ್ಕಾಮ್ ಸೇವೆ ಪಡೆದುಕೊಳ್ಳುವ ಗ್ರಾಹಕರಲ್ಲಿ ಇದು ಆಶಾಬಾವನೆ ಮೂಡಿಸಿದೆ. ಒಂದು ಮಿಂಚೆ ಬದಲಾವಣೆಗೆ ಕಾರಣವಾಗಿದ್ದು, ಕೇವಲ ಮಿಂಚೆಗಳಿಂದ ಬದಲಾವಣೆ ಸಾದ್ಯವೇ ಎಂಬ ಹಲವರ ಪ್ರಶ್ನೆಗೆ ಉತ್ತರ ನೀಡಿದ ಅನೇಕ ಪ್ರಕರಣಗಳ ಜೊತೆಗೆ ಪ್ರಕರಣವೂ ಸೇರಿಕೊಂಡಿದೆ. ನಮ್ಮ ಸುತ್ತ ಮುತ್ತಲಿನ ವ್ಯವಸ್ಥೆಯಲ್ಲಿ ಮಾಹಿತಿ, ಸೇವೆಗಳು ಕನ್ನಡದಲ್ಲಿ ಸಿಗುವಂತಾಗಲು ಗ್ರಾಹಕನ ಆಗ್ರಹವೇ ಪ್ರಮುಖ ಪಾತ್ರ ವಹಿಸುತ್ತದೆ. ಕನ್ನಡದಲ್ಲಿ ಮಾಹಿತಿ, ಸೇವೆಗಳು ಸಿಗದಿದ್ದಾಗ ಅದನ್ನು ಆಗ್ರಹಿಸಿದರೆ ಖಂಡಿತ ಅಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಅನುಶ್ಟಾನದ ಪ್ರಯತ್ನಗಳು ಕಾಣಿಸಿಕೊಳ್ಳುತ್ತದೆ ಎಂಬುದಕ್ಕೆ ಬೆಸ್ಕಾಮ್ ಮತ್ತೊಂದು ಉದಾಹರಣೆಯಾಗಿದೆ.

5 comments:

  1. Hi Mahesh,

    very good efforts , the email can do the change if the organization/company is owned by Karanataka govt but any central govt org/company are not soo sensitive to the kannada issues hope even LIC,BSNL,railways,Air india, Income tax dept,service tax dept, LPG gas office,PSU( BEL,HAL,BHEL,BEMl,ISRO,DRDO,NAL,IIsc,IIM,NSL,Sports authority of india, gives their due to kannada

    ReplyDelete
  2. ನಮಸ್ತೆ ಮಹೇಶರವರೆ,

    ನಿಮ್ಮ ಕಾರ್ಯಕ್ಕೆ ಅಭಿನಂದನೆಗಳು. ಇದೆ ರೀತಿ ನಿಮ್ಮ ಸೇವೆ ಮುಂದುವರಿಯಲಿ ಹಾಗೂ ಎಲ್ಲರಿಗೂ ಮಾರ್ಗದರ್ಶನವಾಗಲಿ.

    ಧನ್ಯವಾದ,
    ಕಿರಣ ಪಾಟೀಲ.

    ReplyDelete
  3. ಪ್ರಶಾಂತ್, ಸೇವೆಯನ್ನು ಬಳಸುವ ಗ್ರಾಹಕರ ಒತ್ತಾಯ ಇದ್ದರೆ ಕೇಂದ್ರ ಸರಕಾರಿ ಕಚೇರಿ ಸೇರಿದಂತೆ ಎಲ್ಲ ಕಡೆಗಳಲ್ಲೂ ಕನ್ನಡ ತರಲು ಸಾದ್ಯ.

    ನನ್ನಿ ಕಿರಣ...

    ReplyDelete
  4. ತುಂಬಾ ಒಳ್ಳೆಯ ಸಂಗತಿ. ಆದಷ್ಟು ಬೇಗ ಮುಗಿದು ನಮ್ಮ ಬೆಂಗಳೂರಿನಲ್ಲಿ ಹೆಚ್ಚು ಕನ್ನಡ ಕಾಣುವಂತೆ ಆಗಲಿ. ಅಭಿನಂದನೆಗಳು ಮಹೇಶ್ ಅವರೇ. :)

    ಧನ್ಯವಾದ,
    ವಿವೇಕ

    ReplyDelete
  5. good effort, i too learnt some thing new from this.
    thanks Mr.Mahesh.

    ReplyDelete

ನಿಮ್ಮ ಮಾತು...