Sunday 8 July 2012

ಈಗ ಇಲ್ಲ ಅಂದ್ರೆ ಇನ್ನೆಂದೂ ಇಲ್ಲ.!


ಗೆಳೆಯರೇ,,
ನಿಮಗೆಲ್ಲ ತಿಳಿದಂತೆ ಇತ್ತೀಚಿಗೆ ಅಬಿನಯ ಚಕ್ರವರ್ತಿ ಎಂಬ ಬಿರುದು ಪಡೆದುಕೊಂಡ ನಮ್ಮ ಕನ್ನಡದ ನಟ ಸುದೀಪ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ತೆಲುಗು ಚಿತ್ರ ಮೊನ್ನೆ ಬಿಡುಗಡೆ ಆಗಿದೆ. ಇದು ಬರೀ ತೆಲುಗಿನಲ್ಲಶ್ಟೇ ಅಲ್ಲದೇ ಇತರ ಮೂರು ಬಾಶೆಗಳಲ್ಲಿ ಸೇರಿದಂತೆ ಒಟ್ಟು ನಾಲ್ಕು (ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ) ಬಾಶೆಗಳಲ್ಲಿ ಬಿಡುಗಡೆ ಆಗಿದೆ, ಆದರೆ ಕನ್ನಡದಲ್ಲಿ ಇಲ್ಲ. ಚಿತ್ರದ ಬಗ್ಗೆ ಮತ್ತು ಸುದೀಪ್ ಅವರ ಅಬಿನಯದ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಲಿವೆ.

ಡಬ್ಬಿಂಗ್ ವಿರೋದಿ = ಕನ್ನಡ ವಿರೋದಿ.!
ಎಂಥ ದುರಂತ ನೋಡಿ. ಕನ್ನಡಿಗನೇ ನಟಿಸಿರುವ ಒಂದು ಚಿತ್ರವನ್ನು ಕರ್ನಾಟಕದಲ್ಲೇ ಕನ್ನಡಿಗರು ಕನ್ನಡದಲ್ಲಿ ನೋಡಲಾಗದಂತ ಹೀನಾಯ ಸ್ಥಿತಿ ಇವತ್ತು ನಮಗೆ ಬಂದಿದೆ. ಸಾಲದ್ದಕ್ಕೆ ಇದಕ್ಕೆ ಕನ್ನಡದ ಕಾರಣವನ್ನೇ ನೀಡಲಾಗುತ್ತಿದೆ. ಕನ್ನಡಿಗನೇ ನಟಿಸಿರುವ ಒಂದು ಚಿತ್ರವನ್ನು ಕರ್ನಾಟಕದಲ್ಲೇ ಕನ್ನಡದಲ್ಲಿ ನೋಡಲು ಅವಕಾಶ ಕೊಡದಿರುವುದು ಕನ್ನಡ ಪರವೇ.? ಪರಬಾಶೆ ಚಿತ್ರವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ ಕರ್ನಾಟಕದಲ್ಲಿ ಕನ್ನಡದಲ್ಲಿ ಮನರಂಜನೆ ಪಡೆಯಲು ಅವಕಾಶ ಕಲ್ಪಿಸಿಕೊಡುವುದು ಕನ್ನಡ ಪರವಾದ ನಡೆಯಲ್ಲವೇ.? ಅಶ್ಟಕ್ಕೂ, ಕಲಾವಿದರು ಕಲೆಗೆ ಬಾಶೆಯಿಲ್ಲ, ಅದಕ್ಕೆ ವ್ಯಾಪ್ತಿಯಿಲ್ಲ ಹಾಗೇ ಹೀಗೆ ಅಂತೆಲ್ಲ ಹೇಳಿ ಅವರ ಆಯ್ಕೆಯನ್ನು, ಅವರ ಅಬಿಮಾನಿ ಬಳಗವನ್ನು ಹೆಚ್ಚಿಸಿಕೊಳ್ಳಬಹುದು, ಆದರೆ ಪ್ರತಿಯೊಂದಕ್ಕೂ ಕನ್ನಡವನ್ನೇ ನೆಚ್ಚಿಕೊಂಡ ಕನ್ನಡ ನೋಡುಗರಿಗೆ ಎಲ್ಲಿದೆ ಆಯ್ಕೆ.? ಒಳ್ಳೆಯ ಚಿತ್ರಗಳು ಕನ್ನಡವೂ ಸೇರಿದಂತೆ ಎಲ್ಲ ಬಾಶೆಗಳಲ್ಲೂ ಕಾಲ ಕಾಲಕ್ಕೆ ಬರುತ್ತಲಿವೆ ಹಾಗೂ ಅದಕ್ಕೆ ತಕ್ಕಂತೆ ಬಾಶೆಯ ವ್ಯಾಪ್ತಿ ಮೀರಿಯೂ ಅವುಗಳಿಗೆ ಅನೇಕ ರಾಜ್ಯಗಳಲ್ಲಿ ಬೇಡಿಕೆ ಸಿಗುತ್ತಲಿದೆ ಎಂಬುದು ನಿರ್ವಿವಾದ. ಆದರೆ ನಮಗೂ ಇತರ ರಾಜ್ಯದ ಜನರಿಗೂ ಇರುವ ವ್ಯತ್ಯಾಸ ಒಂದೇ. ಯಾವುದೇ ಬಾಶೆಯ ಚಿತ್ರವಾದರೂ ಅವರು ಅವರದೇ ಬಾಶೆಯಲ್ಲಿ ಅದರ ಸವಿಯನ್ನು ಉಂಡರೆ, ವಿಶಯದಲ್ಲಿ ನಮಗೆ ಆಯ್ಕೆಯೇ ಇಲ್ಲದೇ ಆಯಾ ಬಾಶೆಯಲ್ಲೇ ನೋಡಬೇಕಾದ ಅನಿವಾರ್ಯತೆ ಇದೆ. ನಮಗೆ ಕನ್ನಡದಲ್ಲಿ ಮನರಂಜನೆ ಪಡೆಯಲು ಅವಕಾಶ ನೀಡದಿರುವುದು ಕನ್ನಡ ವಿರೋದಿ ನಡೆಯಲ್ಲವೇ.? ಡಬ್ಬಿಂಗ ಅನ್ನೋದು ಅಸಹಜ ಪ್ರಕ್ರಿಯೆ, ಹೀಗಾಗಿ ಅಮಿತಾಬ್ ಬಚನ್ ಚಿತ್ರವನ್ನು ಹಿಂದಿಯಲ್ಲಿ ನೋಡಿದರೆನೇ ಚೆನ್ನ, ಚಿರಂಜೀವಿ ಚಿತ್ರವನ್ನು ತೆಲುಗಿನಲ್ಲಿ ನೋಡಿದರೆನೇ ಮದುರ ಅಂತೆಲ್ಲ ಹೇಳುವ ಡಬ್ಬಿಂಗ್ ವಿರೋದಿಗಳಿಗೆ ಒಬ್ಬ ಕನ್ನಡ ನಟನ ಚಿತ್ರವನ್ನು ಕನ್ನಡದಲ್ಲಿ ನೋಡಿದರೆನೇ ಅದು ಸಹಜ ಮತ್ತು ಚೆನ್ನ ಎಂದು ಅನ್ನಿಸಲಿಲ್ಲವೇ.? ಹಾಗೇ ಅನ್ನಿಸಿದ ಮೇಲೆ ಹೀಗೂ ಅನ್ನಿಸಬೇಕಲ್ಲವೇ.! ಹೀಗೆ ಅನ್ನಿಸಿಲ್ಲ ಅಂದ್ರೆ, ಇವರ ವಾದ ಎಲ್ಲ ಪೊಳ್ಳು, ಇವರ ದಾರಿಗೆ ಅಡ್ಡ ಬರುವುದೆಲ್ಲ ಅಸಹಜ ಪ್ರಕ್ರಿಯೆಗಳಾಗಿ ಬಿಡುತ್ತವೆ ಎಂಬ ವ್ಯಾಖ್ಯಾನ ಮೂಡುತ್ತದೆ. ಒಟ್ಟಿನಲ್ಲಿ ಕರ್ನಾಟಕದಲ್ಲೇ ಶಂಕರನಾಗ್, ಸುದೀಪ್ ಅವರ ಬಾಯಲ್ಲಿ ಬೇರೊಂದು ಬಾಶೆಯನ್ನು ಕೇಳಿಸಿಕೊಂಡು ನಮ್ಮ ಕನ್ನಡಾಬಿಮಾನವನ್ನು ಬೆಳೆಸಿಕೊಳ್ಳಬೇಕು ಅಶ್ಟೇ.!!

ನಮಗೆ ಡಬ್ಬಿಂಗ್ ಬೇಡ, ಸ್ಪರ್ದೆ ಎದುರಿಸುವುದು ಬೇಡ, ಮಾರುಕಟ್ಟೆ ವ್ಯಾಪ್ತಿ ಹೆಚ್ಚಿಸಿಕೊಳ್ಳುವುದು ಬೇಡ, ಮನರಂಜನೆಗೆ ಕನ್ನಡವನ್ನೇ ನೆಚ್ಚಿಕೊಳ್ಳುವ ಜನರನ್ನು ಹೆಚ್ಚಿಸಿಕೊಳ್ಳುವುದು ಬೇಡ ಅಂತ ಅಂದ್ರೆ ಇಂದು ಕುಂಟುತ್ತಿರುವ ಕನ್ನಡ ಚಿತ್ರರಂಗ ಸುದಾರಿಸಿ ನಾಳೆ ಓಡಲು ಸಾದ್ಯವೇ.? ಇವತ್ತು ಬದಲಾವಣೆಗೆ ಕನ್ನಡ ಚಿತ್ರರಂಗ ಒಗ್ಗಿಕೊಳ್ಳದಿದ್ದರೆ, ವಸ್ತು ಸ್ಥಿತಿ ಅರಿಯದೇ ಡಬ್ಬಿಂಗ್ ವಿರುದ್ದ ವೀರಾವೇಶದಿಂದ ಮಾತನಾಡುವವರೆಲ್ಲ ನಾಳೆ ಪುನರ್ವಸತಿಗಾಗಿ ಅರ್ಜಿ ಹಾಕುವ ಕಾಲ ಬರುತ್ತದೆ. ಇತ್ತೀಚಿಗಿನ ವಿಜಯ ನೆಕ್ಸ್ಟ ಪತ್ರಿಕೆಯಲ್ಲೂ ಇದರ ಬಗ್ಗೆ ಬೆಳಕು ಚೆಲ್ಲಲಾಗಿದೆ. ಡಬ್ಬಿಂಗ್ ಈಗ ಇಲ್ಲ ಅಂದ್ರೆ ಇನ್ನೆಂದೂ ಇಲ್ಲ.!

3 comments:

  1. neevu heliruvudu nija erabahudu

    ReplyDelete
  2. Padesigalige jaaga kotta namma kannadigarannu, aalalu prayathnisuvadaralli sandehavenu illa!!!!

    Karana ishte :

    Kannadigara hridhaya doddadu !!!! adare nammavarige irallu jaaga mathra bahala chikkadu.
    bagalorina Ella udyamagalli iruva namma kannadigara sankey ottu 25% mathra.

    Udaharane Namma sudeeprava chitra!!

    Nivugale pariganisi!!!!

    Dayavittu Namma Kanndigaru swalpa yedelli Jagrutharagiri???

    Inthi Nimma.

    ReplyDelete

ನಿಮ್ಮ ಮಾತು...