Tuesday 28 August 2012

ಡಿಸ್ಕವರಿ, ಹಿಸ್ಟರಿ ಕನ್ನಡದಲ್ಲೂ ಸಿಗಲಿರೀ.!


ಕನ್ನಡ ಟಿವಿ ಕ್ಶೇತ್ರದಲ್ಲಿ ಎಂಥ ಕಾರ್ಯಕ್ರಮಗಳು ಅಥವಾ ಮನರಂಜನೆಗಳು ಸಿಗುತ್ತಿವೆ ಎಂಥವು ಇಲ್ಲ ಎಂದು ನೋಡಿದ್ರೆ, ಅನೇಕ ಮಾಹಿತಿ, ಮನರಂಜನೆಗಳಿಂದ ಕನ್ನಡದ ನೋಡುಗರಾದ ನಾವು ವಂಚಿತರಾಗುತ್ತಿದ್ದೇವೆ ಎಂಬುದು ತಿಳಿಯುತ್ತದೆ. ನೀವೇ ನೋಡಿ, ಬಾರತದ ಇತರ ಬಾಶೆಗಳಲ್ಲಿ ಲಬ್ಯವಿರುವ ಎಲ್ಲ ಬಗೆಯ ಟಿವಿ ಕಾರ್ಯಕ್ರಮಗಳು ನಮಗೆ ಸಿಗುತ್ತಿವೆಯೇ.? ಕನ್ನಡದ ಟಿವಿ ಕ್ಶೇತ್ರದಲ್ಲಿ ಸುದ್ದಿ ಕೊಡುವುದಕ್ಕಾಗಿ ವಾಹಿನಿಗಳು ಇವೆ, ದಾರಾವಾಹಿಗಳಿಗಾಗಿ ವಾಹಿನಿಗಳು ಇವೆ, ಸಿನಿಮಾ ಮನರಂಜನೆಗಾಗಿ ವಾಹಿನಿಗಳು ಇವೆ, ಬರೀ ಸಿನಿಮಾ ಹಾಡುಗಳಿಗಾಗಿ ವಾಹಿನಿಗಳು ಇವೆ, ಆದರೆ ಜಗತ್ತಿನ ಜ್ನಾನ ವಿಜ್ನಾನ ಮಾಹಿತಿಗಳನ್ನು ತಿಳಿಸಿಕೊಡಲು ಒಂದಾದರೂ ವಾಹಿನಿ ಇದೆಯೇ.? ಬಂಡವಾಳ ಮತ್ತು ಮಾಹಿತಿ ಕ್ರೋಡಿಕರಣದ ಸಮಸ್ಯೆಯಿಂದ ಬಹುಶ ಪ್ರಯತ್ನ ಆಗಿರಲಿಕ್ಕಿಲ್ಲ ಎಂಬುದು ಒಂದು ಅಂಶವಾದರೂ, ಹಾಗೆ ನೋಡಿದರೆ ಹಿಂದಿ ಸೇರಿದಂತೆ ಬಾರತದ ಇತರ ಪ್ರಮುಕ ಪ್ರಾದೇಶಿಕ ಬಾಶೆಗಳಲ್ಲೂ ಜ್ನಾನ ವಿಜ್ನಾನಗಳನ್ನು ೨೪ ಜನರ ಮುಂದಿಡುವ ವಾಹಿನಿಗಳು ಇಲ್ಲ. ಆದರೆ ಇಂಗ್ಲೀಶಿನಲ್ಲಿ ಜ್ನಾನ ವಿಜ್ನಾನದ ಸುತ್ತ ಮುತ್ತ ಕಾರ್ಯಕ್ರಮಗಳನ್ನು ಹೆಣೆಯುವ ಅನೇಕ ವಾಹಿನಿಗಳು ಇವೆ. ಡಿಸ್ಕವರಿ, ನ್ಯಾಶನಲ್ ಜಿಯೋಗ್ರಾಫಿಕ್ ಚಾನಲ್, ಹಿಸ್ಟರಿ ೧೮, ಯು ಟಿವಿ ಹೀಗೆ ಅನೇಕ ವಾಹಿನಿಗಳು ಇವೆ. ಹಾಗಂತ ಕನ್ನಡದ ಹಾಗೆ ಬಾಶೆಗಳಲ್ಲೂ ಜ್ನಾನ ವಿಜ್ನಾನದ ಮಾಹಿತಿಗಳು ಆಯಾ ಜನರಿಗೆ ಸಿಗುತ್ತಿಲ್ಲ ಎಂದು ತಿಳಿದರೆ ನಮ್ಮ ಊಹೆ ತಪ್ಪಾಗುತ್ತದೆ. ಯಾಕೆಂದರೆ ಕನ್ನಡದಲ್ಲಿ ಯಾವುದು ಇಲ್ಲವೋ ಅಥವಾ ಸಿಗುತ್ತಿಲ್ಲವೋ ಅವೆಲ್ಲವೂ ತೆಲುಗು, ತಮಿಳು, ಹಿಂದಿ, ಬಂಗಾಳಿ ಬಲ್ಲ ಜನರಿಗೆ ಸಿಗುತ್ತಿದೆ. ಬಾರತದ ಅನೇಕ ಬಾಶೆಗಳ ನೋಡುಗರ ಬೇಡಿಕೆಗೆ ಅನುಗುಣವಾಗಿ ವಾಹಿನಿಗಳು ಇತ್ತೀಚಿಗೆ ಬಾಶೆಗಳಲ್ಲೂ ಸಿಗುತ್ತಿವೆ. ಹೀಗಾಗಿ ಡಿಸ್ಕವರಿಯಂತಹ ವಾಹಿನಿಗಳಲ್ಲಿ ಕಾಣಸಿಗುವ ಮಾಹಿತಿ-ಮನರಂಜನೆಗಳು ಆಯಾ ಬಾಶೆಯ ಜನರಿಗೆ ಅವರದೇ ಬಾಶೆಯಲ್ಲಿ ಸಿಗುತ್ತಿದೆ. ಆದರೆ ಹೆಚ್ಚು ಕಡಿಮೆ ಅಶ್ಟೇ ನೋಡುಗರಿರುವ, ಅಶ್ಟೇ ಬೇಡಿಕೆ ಇರುವ ಕನ್ನಡಕ್ಕೆ ಇದು ಲಬ್ಯ ಇಲ್ಲ. ಇದಕ್ಕೆ ಇಲ್ಲಿ ಎರಡು ಅಂಶಗಳನ್ನು ನಾವು ಮೂಲವಾಗಿ ಕಾಣಬಹುದು. ಒಂದು ಬೇಡಿಕೆಯನ್ನು ಅವರ ಮುಂದಿಡುವ ಪ್ರಯತ್ನಗಳು ನಮ್ಮಲಿ ಪರಿಣಾಮಕಾರಿಯಾಗಿ ಆಗದಿರುವುದು, ಮತ್ತೊಂದು ಪೂರೈಕೆಗೆ ಆಯಾ ವಾಹಿನಿಗಳು ಸಿದ್ದವಿದ್ದರೂ ಡಬ್ಬಿಂಗ್ ಬ್ಯಾನ್ (ಅಥವಾ ಇತ್ತೀಚಿಗಿನ ಸೋ ಕಾಲ್ಡ್ ಸಾಮಾಜಿಕ ಕಟ್ಟುಪಾಡು) ಎಂಬ ಅಸಂವಿದಾನಿಕ ನಡೆ ಅದನ್ನು ತಡೆಯುತ್ತಿರುವುದು.

ಎಲ್ಲ ಕಾರಣಗಳಿಂದ ಕನ್ನಡದ ಮಂದಿ ಟಿವಿ ಮಾದ್ಯಮದ ಮೂಲಕ ಜ್ನಾನ ವಿಜ್ನಾನ ಪಡೆದುಕೊಳ್ಳುವ ಅವಕಾಶದಿಂದ ವಂಚಿತವಾಗುತ್ತಿದೆ. ಹೀಗಾಗಿ ಇಂದಿಗೂ ಡಿಸ್ಕವರಿ, ನ್ಯಾಟ್ ಜಿಯೋ ನಂತಹ ವಾಹಿನಿಗಳು ಕನ್ನಡದವರಿಗೆ ಇದ್ದರೂ ಇಲ್ಲದಂತಾಗಿವೆ. ಕೆಲವೇ ಕೆಲವರು ತಮ್ಮ ಸ್ವಹಿತಾಸಕ್ತಿಗಾಗಿ, ಸ್ಪರ್ದಾತ್ಮಕ ವಾತಾವರಣದ ಹಿಂಜರಿಕೆಯಿಂದ ಅವೈಜ್ನಾನಿಕ ಕಾರಣಗಳನ್ನು ನೀಡಿ ಕೈಗೊಳ್ಳುವ ತೀರ್ಮಾನ ಇಂದು ಸಾಮಾಜಿಕ ಕಟ್ಟುಪಾಡಿನ ಹೆಸರಿನಲ್ಲಿಯೇ ಸಮಾಜ ವಿರೋದಿ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿದೆ. ಒಟ್ಟಿನಲ್ಲಿ ಪ್ರತಿಯೊಂದು ಜನವಿರೋದಿ ನಡೆಗೂ ಕೊನೆ ಇರೋ ಹಾಗೆ ಇದಕ್ಕೂ ಕೊನೆ ಇದೆ ಎಂಬುದರಲ್ಲಿ ಎಳ್ಳಶ್ಟೂ ಸಂಶಯವಿಲ್ಲ. ಗ್ರಾಹಕನ ಆಗ್ರಹವೇ ಮುಂದಿನ ದಿನಗಳಲ್ಲಿ ಇದಕ್ಕೆ ಕೊನೆ ಹಾಡಬಹುದು ಮತ್ತು ಎಲ್ಲ ಮಾಹಿತಿ-ಮನರಂಜನೆಯನ್ನು ನಮ್ಮ ಬಾಶೆಯಲ್ಲೇ ನಾವು ಪಡೆಯಲು ಸಹಕಾರಿಯಾಗಬಹುದು. ಅಂತಹ ಒಂದು ಪ್ರಯತ್ನಕ್ಕೆ ನಿಮ್ಮ ಕೈನೂ ಸೇರಿದರೆ ಬೇಡಿಕೆಗೆ ಬಲ ಬರುತ್ತೆ, ಮೂಲಕ ಮಾಹಿತಿ ಪೂರೈಕೆ ಆಗುತ್ತೆ.  ಆದ್ದರಿಂದ ಜ್ನಾನ ವಿಜ್ನಾನದ ಸುತ್ತ ಮುತ್ತ ಕಾರ್ಯಕ್ರಮಗಳನ್ನು ಹೆಣೆಯುವ ವಾಹಿನಿಗಳ ಕನ್ನಡದ ಅವತರಣಿಕೆಗಾಗಿ ಎಲ್ಲರೂ ಒತ್ತಾಯಿಸೋಣ. ಬೇಡಿಕೆಯ ಅರಿವು ಅವರಿಗೆ ಮೂಡಿಸೋಣ.

Discovery Channel:
ಇಲ್ಲಿಗೆ ಮಿಂಚೆ ಬರೆಯಿರಿ: feedback_india@discovery.com, programme_india@discovery.com
ಜೊತೆಗೆ ಅವರ ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಸಹ ಮನವಿ ಮಾಡೋಣ.
http://www.facebook.com/DiscoveryChannel
http://twitter.com/#!/discovery
http://www.discoverychannel.co.in/contact-us

National Geographic Channel:
ಇಲ್ಲಿಗೆ ಮಿಂಚೆ ಬರೆಯಿರಿ: feedback@ngcindia.com,  
comments@natgeochannel.com, askngs@nationalgeographic.com
ಜೊತೆಗೆ ಅವರ ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಸಹ ಮನವಿ ಮಾಡೋಣ.
"http://www.facebook.com/natgeo
http://twitter.com/#!/NatGeo, https://twitter.com/#!/natgeotv_india
http://www.facebook.com/natgeotv.india

History Channel:
http://www.history.com/support, http://www.historyindia.com/contact-us
http://www.facebook.com/History, http://www.facebook.com/HISTORYIndia
http://twitter.com/#!/historychannel, http://twitter.com/#!/history_india