Sunday 14 October 2012

ಪರಬಾಶೆ ಪ್ರಚಾರ ಮತ್ತು ಡಬ್ಬಿಂಗ್ ವಿರೋದ. ಎರಡೂ ಕನ್ನಡೋದ್ಯಮಗಳಿಗೆ ಮಾರಕ.!

ಕಳೆದ ಕೆಲವು ದಿನಗಳಿಂದ ವಿಜಯ ಕರ್ನಾಟಕವನ್ನು ನೀವು ಗಮನಿಸುತ್ತಿದ್ದರೆ ನೀವು ನಿಜಕ್ಕೂ ಹೆಮ್ಮೆ ಪಟ್ಟುಕೊಳ್ಳಲೇಬೇಕು. ಯಾಕಂದ್ರೆ, ಕರ್ನಾಟಕದ ನಂ ಪತ್ರಿಕೆ ಎಂದು ಹೇಳಲಾಗುವ ವಿಜಯ ಕರ್ನಾಟಕದಲ್ಲಿ ಎಗ್ಗಿಲ್ಲದೇ ಹಿಂದಿ ಚಿತ್ರಗಳ ಪ್ರಚಾರ ನಡೆಯುತ್ತಿದೆ. ಸಮಸ್ತ ಕನ್ನಡಿಗರ ಹೆಮ್ಮೆ ಎಂದು ಹೇಳಿಕೊಳ್ಳುವ ಪತ್ರಿಕೆ ಕನ್ನಡ ಮನರಂಜನೆಯನ್ನೂ ದೂರ ಸರಿಸಿ ಹಿಂದಿಗೆ ಹೆಚ್ಚು ಪ್ರಚಾರ ಕೊಡುತ್ತಿದೆ. ದಿನವೂ ಮುಕಪುಟದಲ್ಲಿ ಹಿಂದಿ ಚಿತ್ರಗಳ, ಕಲಾವಿದರ ಬಗ್ಗೆ ಪ್ರಚಾರ ಕೊಡಲಾಗುತ್ತಿದೆ. ಹಿಂದಿ ಹೇರಿಕೆಯಲ್ಲಿ ಕೇಂದ್ರ ಸರಕಾರಕ್ಕಿಂತ ನಾವೇನೂ ಕಮ್ಮಿ ಇಲ್ಲ ಎನ್ನುವಂತಿದೆ ಪತ್ರಿಕೆಗಳ ಮುಕಪುಟಗಳು.!


ಸಮಸ್ತ ಕನ್ನಡಿಗರ ಹೆಮ್ಮೆಗೆ ಬಗೆಯುತ್ತಿರುವ ದ್ರೋಹ.!
ನಂ ಸ್ಥಾನಕ್ಕೆ ಬರುವಾಗ ಇದ್ದ ಓದುಗರ ಬಗೆಗಿನ ಕಾಳಜಿ ವಿಜಯ ಕರ್ನಾಟಕಕ್ಕೆ ಈಗ ಇದ್ದಂಗಿಲ್ಲ. ನಂ ಸ್ಥಾನಕ್ಕೆ ಬಂದ ನಂತರ ಓದುಗರ ಮೇಲೆ ಏನು ಹೇರಿದ್ರು ನಡೆಯುತ್ತೆ ಎಂದು ತಿಳಿದಂತಿದೆ ಪತ್ರಿಕೆ. ಗ್ರಾಹಕನ ಅನುಕೂಲತೆಗಳನ್ನು ಅರಿಯದೇ ಅವರ ಮೇಲೆ ಹೇರಿಕೆ ನಡೆಸುವ ಯಾವ ಉದ್ದಿಮೆಯೂ ದೀರ್ಗಕಾಲ ಇರಲಾರದು ಎಂಬುದನ್ನು ಪತ್ರಿಕೆ ಅರಿಯಬೇಕಿದೆ. ಪತ್ರಿಕೆಯ ಓದುಗರು ಕನ್ನಡಿಗರೇ, ಕನ್ನಡ ಬಲ್ಲವರೇ ಆಗಿರುತ್ತಾರೆ. ಹೀಗಾಗಿ, ಸ್ವಾಬಾವಿಕವಾಗಿ ಅವರ ನಿರೀಕ್ಶೆ ಕನ್ನಡ ಮನರಂಜನೆಯೇ ಆಗಿರುತ್ತದೆ. ಮನರಂಜನೆ ಮೂಲಕ ಹಿಂದಿ ಹೇರುವುದು ಸಮಸ್ತ ಕನ್ನಡಿಗರು ವಿ. ಮೇಲೆ ಇಟ್ಟ ಹೆಮ್ಮೆಗೆ ಬಗೆಯುವ ದ್ರೋಹ ಎಂದರೆ ತಪ್ಪಾಗಲ್ಲ.!

ಕನ್ನಡದ ಡಬ್ಬಿಂಗ್ ಬೇಡ.! ಹಿಂದಿ ಪ್ರಚಾರ ಓಕೆನಾ.?
ಪತ್ರಿಕೆಗಳಲ್ಲಿ ಥರ ಹಿಂದಿ ಚಿತ್ರಗಳ ಪ್ರಚಾರಕ್ಕೆ ಸಾಥ ಕೊಡುತ್ತಿರುವವರು ಯಾರು ಗೊತ್ತೆ.! ಪರಬಾಶೆ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡುವುದನ್ನು ವಿರೋದಿಸುವವರು. ಅದಕ್ಕೆ ಅವರು ಕಾರಣ ನೀಡುವುದು ಏನು ಗೊತ್ತೆ.! ಡಬ್ಬಿಂಗಿನಿಂದ ಕನ್ನಡ ಚಿತ್ರಗಳಿಗೆ ಹೊಡೆತ ಬಿಳುತ್ತೆ. ಡಬ್ಬಿಂಗಿನಿಂದ ಕನ್ನಡ ಚಿತ್ರಗಳ ಸಂಕ್ಯೆಯೇ ಕಡಿಮೆ ಆಗಿ ಬಿಡುತ್ತೆ. ಡಬ್ಬಿಂಗಿನಿಂದ ಕನ್ನಡ ಕಲಾವಿದರಿಗೆ ಕೆಲಸ ಹೋಗುತ್ತೆ. ಡಬ್ಬಿಂಗಿನಿಂದ ಕನ್ನಡ ಚಿತ್ರ ನೋಡುವವರ ಸಂಕ್ಯೆ ಕಡಿಮೆ ಆಗುತ್ತೆ. ಹೀಗೆಲ್ಲ ರಂಪಾಟ ಮಾಡುವವರು ನಿದಾನವಾಗಿ ಪತ್ರಿಕೆಗಳ ಮೂಲಕ ಹಿಂದಿ ಚಿತ್ರಗಳ ಪ್ರಚಾರ ಮಾಡುತ್ತಿದ್ದಾರೆ. ಮೂಲಕ ಹಿಂದಿ ಚಿತ್ರಗಳಿಗೆ ರಾಜ್ಯದಲ್ಲಿ ಮಾರುಕಟ್ಟೆ ನಿರ್ಮಿಸಿ ಕೊಡುತ್ತಿದ್ದಾರೆ. ಕನ್ನಡಿಗರ ದೌರ್ಬಾಗ್ಯ ಎಂದರೆ ಸಂದರ್ಬ ಬಂದಾಗ ಇವರೇ ಮುಂದೆ ಬಂದು ಕನ್ನಡ ಚಿತ್ರರಂಗದ ಬಗ್ಗೆ ಕಳಕಳೀ ಮಾತು ಆಡುತ್ತಾರೆ.  ಹಿಂದಿ ಚಿತ್ರಗಳ ಪ್ರಚಾರ ಮಾಡಿದ್ರೆ, ಅವರು ಮೇಲೆ ನೀಡುವ ಕಾರಣಗಳಿಗೆ ಉತ್ತರ ಸಿಗುತ್ತ ಎಂಬುದನ್ನು ಅವರೇ ಹೇಳಬೇಕಿದೆ. ಕನ್ನಡದ ಡಬ್ಬಿಂಗ್ ಬೇಡ, ಆದರೆ ಹಿಂದಿ ಚಿತ್ರಗಳ ಪ್ರಚಾರ ಬೇಕು. ಇದು ಕನ್ನಡಪರವೇ.? ಡಬ್ಬಿಂಗ್ ವಿರೋದಿಸುವುದಕ್ಕೆ ನೈತಿಕತೆ ಇದೆಯೇ ಇವರಿಗೆ.!

ತಮ್ಮ ಅನ್ನಕ್ಕೆ ಕುತ್ತು.!
ಇವತ್ತು ಕನ್ನಡ ಪತ್ರಿಕೋದ್ಯಮ ಆಗಿರಬಹುದು, ಕನ್ನಡ ಚಿತ್ರರಂಗ ಆಗಿರಬಹುದು ಎಲ್ಲರಿಗೂ ಅನ್ನ ನೀಡುತ್ತಿರುವುದು ಕನ್ನಡ.! ಪತ್ರಿಕೋದ್ಯಮ, ಚಿತ್ರರಂಗ ತನ್ನ ಗ್ರಾಹಕರಾದ ಕನ್ನಡ ಜನತೆಯನ್ನು ಪರಬಾಶೆ ಕಡೆಗೆ ವಾಲಿಸಿದಶ್ಟು ಜನರು ಕನ್ನಡದಿಂದ ದೂರ ಸರಿಯುತ್ತಾರೆ. ಅದರರ್ಥ, ಮೂಲಕ ಉದ್ಯಮಗಳು ತಮ್ಮ ಅನ್ನಕ್ಕೆ ಕುತ್ತು ತಂದುಕೊಳ್ಳುತ್ತಿವೆ. ಒಂದು ಗಾದೆ ಮಾತಿದೆ. ಕೋತಿ ತಾನು ಕೆಡುವುದಲ್ಲದೇ ವನವನ್ನೆಲ್ಲಾ ಕೆಡಿಸಿತು ಎಂಬಂತೆ ಸಾರ್ವಜನಿಕ ಕ್ಶೇತ್ರದಲ್ಲಿರುವ ಉದ್ಯಮಗಳು ಪರಬಾಶೆಗೆ ಪ್ರಚಾರ ಕೊಡುವುದರ ಮೂಲಕ ತಮ್ಮ ತಲೆ ಮೇಲೆ ಚಪ್ಪಡಿ ಕಲ್ಲು ಹಾಕಿಕೊಳ್ಳುವುದರ ಜೊತೆಗೆ ತಮ್ಮ ಸುತ್ತಲಿನ ಸಾಮಾಜಿಕ ವ್ಯವಸ್ಥೆಯನ್ನೂ ಹಾಳು ಮಾಡುತ್ತಿವೆ.


ಪರಬಾಶೆ ಪ್ರಚಾರ ಮತ್ತು ಡಬ್ಬಿಂಗ್ ವಿರೋದ. ಎರಡೂ ಕನ್ನಡಕ್ಕೆ ಮಾರಕ.!

ಪರಬಾಶೆ ಚಿತ್ರಗಳ ಸುದ್ದಿಗಳು ಕನ್ನಡ ಪತ್ರಿಕೆಗಳಿಗೆ ಉಪ್ಪಿನಕಾಯಿ ಥರ ಆಗಬೇಕೇ ಹೊರತು ಊಟದ ಥರ ಆಗಬಾರದು. ಪರಬಾಶೆ ಮನರಂಜನೆಯನ್ನು ತಮ್ಮ ಓದುಗರ ಮೇಲೆ ಹೇರುವುದು ಪತ್ರಿಕಾ ದರ್ಮ ಮೆಚ್ಚುವ ನಡೆಯಲ್ಲ. ಇನ್ನು, ಕಲೆಗೆ ಬಾಶೆಯಿಲ್ಲ ಎಂದು ಬೀಗುವ ನಮ್ಮ ಚಿತ್ರರಂಗದ ಕಲಾವಿದರು ತಮ್ಮ ಕಲೆ ನೋಡುವವರಿಗೆ ಒಂದು ಬಾಶೆಯಿದೆ, ಅವರಿಗೆ ಅದೇ ಬಾಶೆಯಲ್ಲಿ ಮನರಂಜನೆ ಬೇಕು ಎಂಬ ಸಾಮಾನ್ಯ ಅಂಶವನ್ನು ಮರೆಮಾಚುತ್ತಾರೆ. ಇವರು ಪರಬಾಶೆ ಚಿತ್ರಗಳನ್ನು ನೋಡಿ, ಪ್ರಚಾರ ಮಾಡಬಹುದು, ಸಮಾರಂಬಗಳಲ್ಲಿ ಕುಣಿಯಬಹುದು, ಟಿವಿ ರಿಲಾಲಿಟಿ ಶೋ ಗಳಲ್ಲಿ ಕುಣಿಸಬಹುದು, ಆದರೆ ಸಾಮಾನ್ಯ ಪ್ರೇಕ್ಶಕರು ಒಂದು ಪರಬಾಶೆ ಚಿತ್ರವನ್ನು ಕನ್ನಡದಲ್ಲಿ ನೋಡಬೇಕೆಂದರೆ, ಅದಕ್ಕೆ ಅಡ್ಡಗಾಲು ಹಾಕಿ, ಹಾದಿ ಬೀದಿ ರಂಪಾಟ ಮಾಡ್ತಾರೆ. ಇಲ್ಲಿ ಏಳುವ ನೈತಿಕತೆಯ ಪ್ರಶ್ನೆಗೆ ಉತ್ತರವನ್ನು ಪರಬಾಶೆ ಮನರಂಜನೆ ಪ್ರಚಾರಕರು ಮತ್ತು ಡಬ್ಬಿಂಗ್ ವಿರೋದಿಗಳೇ ನೀಡಬೇಕಿದೆ.



No comments:

Post a Comment

ನಿಮ್ಮ ಮಾತು...